ಕಣ್ತುಂಬ ಕನಸುಗಳ ಸುಮ ಹೊತ್ತು
ಲತೆಯಾಗಿ ನಿಂತಿರುವೆ
ತಂಗಾಳಿಯಾಗೊಮ್ಮೆ ನೇವರಿಸು ನನ್ನ....
ಸುಮಧುರ ಭಾವಗಳ ತವರಾಗಿ
ಊರ್ಧ್ವಮುಖಿಯಾಗಿ ಕಾದಿರುವೆ
ಬೆಳದಿಂಗಳಾಗಿ ಒಮ್ಮೆ ಸ್ಪರ್ಶಿಸು ನನ್ನ.......
ನನ್ನೆದೆಯ ಹಾಡಿಗೆ ರಾಗವಿಲ್ಲ ತಾಳವಿಲ್ಲ
ವೈಣಿಕನಾಗೊಮ್ಮೆ ಶ್ರುತಿಯಾಗಿಸು ನನ್ನ........
ಬಾಳ ನೌಕೆಯಲಿ ಒಬ್ಬಂಟಿ ಪಯಣಿಗಳು ನಾನು
ನಾವಿಕನಾಗಿ ಆ ತೀರಕ್ಕೊಮ್ಮೆ ಸೇರಿಸು ನನ್ನ.....
ಕಣ್ತುಂಬ ಕನಸುಗಳ ಸುಮ ಹೊತ್ತು
ReplyDeleteಲತೆಯಾಗಿ ನಿಂತಿರುವೆ
ತಂಗಾಳಿಯಾಗೊಮ್ಮೆ ನೇವರಿಸು ನನ್ನ.... ತುಂಬಾ ಇಷ್ಟ ಆಯ್ತು
Thank u dear
ReplyDelete